ಕರ್ನಾಟಕದ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಮತ್ತೊಂದು ಪ್ರಮುಖ ಅವಕಾಶ ದೊರೆಯುತ್ತಿದೆ . ಕರ್ನಾಟಕ ಕಾರಾಗೃಹ ಇಲಾಖೆಯ ನೇಮಕಾತಿ 2026 ರ ಅಡಿಯಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಮತ್ತೊಂದು ಪ್ರಮುಖ ಅವಕಾಶ ದೊರೆಯುತ್ತಿದೆ. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ವಾರ್ಡರ್ ( ವೀಕ್ಷಕರು ) ಹಾಗೂ ಧ್ವಿತೀಯ ದರ್ಜೆಯ ಭೋದಕರು (instructor Grade -II) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಮಾಡಲಾಗಿದೆ .
ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಒಟ್ಟು 576 ಹುದ್ದೆಗಳು ಖಾಲಿ ಇದ್ದು ಇದರಲ್ಲಿ . 560 ವಾರ್ಡರ್ ಹುದ್ದೆಗಳು ಮತ್ತು 16 ದ್ವಿತೀಯ ದರ್ಜೆ ಬೋಧಕರ ಹುದ್ದೆಗಳು ಸೇರಿಕೊಂಡಿವೆ . ಈ ನೇಮಕಾತಿಗೆ ಸಂಬಂಧಿಸಿದೆ ಅಧಿಸೂಚನೆಯನ್ನು 18 ಸೆಪ್ಟೆಂಬರ್ 2026 ರಂದು ಪ್ರಕಟಿಸಲಾಗುತ್ತದೆ .
ಕರ್ನಾಟಕ ಕಾರಾಗೃಹ ಇಲಾಖೆಯ ನೇಮಕಾತಿ 2026 ಪ್ರಮುಖ ವಿವರಗಳು
ಈ ನೇಮಕಾತಿಯಲ್ಲಿ ಎರಡು ಪ್ರಮುಖ ಹುದ್ದೆಗಳಿಗೆ ಅವಕಾಶ ನೀಡಲಾಗಿದೆ .
| ಹುದ್ದೆ | ಖಾಲಿ ಹುದ್ದೆಗಳು | ವೇತನ ಶ್ರೇಣಿ |
|---|---|---|
| ವಾರ್ಡರ್ | 560 | 37500 – 76100 |
| ದ್ವಿತೀಯ ದರ್ಜೆ ಭೋದಕರು | 16 | 37500 – 76100 |
| ಒಟ್ಟು | 576 | – |
ಅಂದರೆ , SSLC ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ವಾರ್ಡರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅವಕಾಶವಿದ್ದು ,ನಿರ್ದಿಷ್ಟ ತಾಂತ್ರಿಕ ವಿದ್ಯಾರ್ಹತೆ ಹೊಂದಿರುವವರಿಗೆ Instructor Grade -ಈ ಹುದ್ದೆಯಲ್ಲಿಯೂ ಅವಕಾಶವಿದೆ .
ಶೈಕ್ಷಣಿಕ ಅರ್ಹತೆ ಏನು ?
ವಾರ್ಡರ್ ಹುದ್ದೆಗೆ ಅಭ್ಯರ್ಥಿಗಳು SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಅದಕ್ಕೆ ಸಮನಾಗಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು .
ದ್ವಿತೀಯ ದರ್ಜೆ ಭೋದಕರ ಹುದ್ದೆಗಳಿಗೆ SSLC ಜೊತೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ Mechanical , Electrical , Carpet Making ಮುಂತಾದ ಸಂಬಂಧಿತ ಕ್ಷೇತ್ರಗಳಲ್ಲಿ Diploma ಅಥವಾ Certificate ಹೊಂದಿರಬೇಕು .
ಅರ್ಜಿ ಸಲ್ಲಿಕೆಯ ದಿನಾಂಕಗಳು
ಅಧಿಸೂಚನೆಯಲ್ಲಿ ನೀಡಿರುವ ವೇಳಾಪಟ್ಟಿಯ ಪ್ರಕಾರ ಆನ್ ಲೈನ್ ಅರ್ಜಿ ಸಲ್ಲಿಕೆಯ 19 ಸೆಪ್ಟೆಂಬರ್ 2026 ರಿಂದ ಆರಂಭವಾಗುತ್ತದೆ . ಅರ್ಜಿ ಸಲ್ಲಿಸಲ್ಲು ಕೊನೆಯ ದಿನಾಂಕ 15 ಅಕ್ಟೋಬರ್ 2026 ಕೊನೆಯ ದಿನಾಂಕವಾಗಿರುತ್ತದೆ .
ಆದ್ದರಿಂದ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ವರೆಗೆ ಕಾಯದೆ , ತಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಉತ್ತಮವಾಗಿರುತ್ತದೆ .

ಅರ್ಜಿ ಶುಲ್ಕ ಎಷ್ಟು ?
ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ .
1 = ಸಾಮಾನ್ಯ ಅರ್ಹತೆ ಹಾಗೂ ಇತರ ಸಂಬಂಧಿತ ವರ್ಗದ ಅಭ್ಯರ್ಥಿಗಳಿಗೆ – 750
2 = ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಹಾಗೂ ಇತರ ಅರ್ಹ ವರ್ಗಗಳ ಅಭ್ಯರ್ಥಿಗಳಿಗೆ – 500
ಶುಲ್ಕ ಪಾವತಿಸುವ ಮೊದಲು ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಅನ್ವಯಿಸುವ ನಿಯಮಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು .
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ?
ಈ ನೇಮಕಾತಿಯಲ್ಲಿ ಕೇವಲ ಲಿಖಿತ ಪರೀಕ್ಷೆ ಮಾತ್ರವಲ್ಲದೆ ದೈಹಿಕ ಸಾಮರ್ತ್ಯಕ್ಕೂ ಮಹತ್ವವನ್ನು ನೀಡಲಾಗಿದೆ . ಅಭ್ಯರ್ಥಿಗಳು * ಲಿಖಿತ ಪರೀಕ್ಷೆ , ದೈಹಿಕ ಗುಣಮಟ್ಟ ಪರೀಕ್ಷೆ ( Physical Standard Test ) ಮತ್ತು ಸಹನಶಕ್ತಿ ಪರೀಕ್ಷೆ (Endurance Test )* ಸೇರಿದಂತೆ ಅಧಿಸೂಚನೆಯಲ್ಲಿ ತಿಳಿಸಿರುವ ಹಂತಗಳನ್ನು ಎದುರಿಸಬೇಕಾಗುತ್ತೆದೆ .
ಲಿಖಿತ ಪರೀಕ್ಷೆಯು Offline – OMR ಮಾದರಿಯಲ್ಲಿ ನೆಡೆಯಲಿದೆ .
ಪರೀಕ್ಷೆಯಲ್ಲಿ ಒಟ್ಟು * 100 ಪ್ರಶ್ನೆಗಳು ಹಾಗೂ 100 ಅಂಕಗಳು * ಇರಲಿದ್ದು , ಪರೀಕ್ಷೆಯ ಅವಧಿ * 1 ಗಂಟೆ 30 ನಿಮಿಷಗಳು * ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ .
ತಪ್ಪು ಉತ್ತರಗಳಿಗೆ * Negative Marking * ಕೂಡ ಇದೆ . ಆದ್ದರಿಂದ ಅಭ್ಯರ್ಥಿಗಳು ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಉತ್ತರಿಸುವುದು ಮುಖ್ಯ .
ದೈಹಿಕ ಪರೀಕ್ಷೆ ಕೂಡ ಮುಖ್ಯ .
ವಾರ್ಡರ್ ಹುದ್ದೆಗೆ ಅರ್ಜಿ ಸಲ್ಲಿಸುವರು ದೈಹಿಕ ಪರೀಕ್ಷೆಗೆ ಸಿದ್ಧರಾಗಿರಬೇಕು . ಅಧಿಸೂಚನೆಯಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ದೈಹಿಕ ಮಾನದಂಡಗಳನ್ನು ನೀಡಲಾಗುತ್ತದೆ .
ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 168 ಸೇಂ .ಮೀ ಎಂದು ನೀಡಲಾಗಿದ್ದು . ಕೆಲವು ವರ್ಗಗಳಿಗೆ ನಿಗದಿತ ನಿಯಮಗಳ ಪ್ರಕಾರ ವಿನಾಯಿತಿ ಇದೆ . ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 157 ಸೇಂ. ಮೀ * ಎಂದು ಸೂಚಿಸಲಾಗಿದೆ .
ಸಹನಶಕ್ತಿ ಪರೀಕ್ಷೆಯಲ್ಲಿ ಓಟ ಸೇರಿದಂತೆ ವಿವಿಧ ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ . ಅಭ್ಯರ್ಥಿಗಳು ಈ ಪರೀಕ್ಷೆಗೆ ಮುಂಚಿತವಾಗಿಯೇ ದೈಹಿಕ ಅಭ್ಯಾಸ ಆರಂಭಿಸುವುದು ಸಹಾಯಕವಾಗಬಹುದು .

ವೈಧ್ಯಕೀಯ ಪರೀಕ್ಷೆ
ನೇಮಕಾತಿ ಪ್ರಕ್ರಿಯೆಯ ಮುಂದಿನ ಹಂತದಲ್ಲಿ ವೈಧ್ಯಕೀಯ ಪರೀಕ್ಷೆಯು ಇರಲಿದೆ . ದೃಷ್ಟಿ , ಕಿವಿ ಸಂಬಂಧಿತ ಪರೀಕ್ಷೆಗಳು , ಎದೆ X -Ray ಮತ್ತು ಅಗತ್ಯ ಇರುವ ಇತರ ವೈಧ್ಯಕೀಯ ಪರೀಕ್ಷೆಗಳನ್ನು ನೆಡೆಸುವ ಬಗ್ಗೆ ಅಧಿಸೂಚನೆಯಲ್ಲಿ ವಿವರಿಸಲಾಗುತ್ತದೆ .
Knock Knees , Flat Foot , Cubitus Valgus , Cubitus Varus ಮುಂತಾದ ಕೆಲವು Musculoskeletal Deformities ಕುರಿತು ಕೂಡ ವೈದ್ಯಕೀಯ ಅರ್ಹತಾ ನಿಯಮಗಳನ್ನು ನೀಡಲಾಗಿದೆ .
ಅಭ್ಯರ್ಥಿಗಳು ಸಿದ್ಧವಾಗಿಟ್ಟುಕೊಳ್ಳಬೇಕಾದ ದಾಖಲೆಗಳು
ಆನ್ ಲೈನ್ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳಿಗೆ ಫೋಟೋ ಮತ್ತು ಸಹಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಆಫ್ ಲೋಡ್ ಮಾಡಬೇಕಾಗುತ್ತದೆ . ಅಧಿಸೂಚನೆಯಲ್ಲಿ ಇತ್ತೀಚಿನ ಫೋಟೋ ಮತ್ತಿ ಸಹಿಯನ್ನು JPEG ಮದರಾಲಿಯಲ್ಲಿ ಆಫ್ ಲೋಡ್ ಮಾಡುವ ಬಗ್ಗೆ ಸೂಚಿಸಲಾಗಿದೆ .
ಅಭ್ಯರ್ಥಿಗಳು ಸಾಮಾನ್ಯವಾಗಿ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಅನುಕೂಲಕರ :
1 ) SSLC ಅಂಕಪಟ್ಟಿ / ಪ್ರಮಾಣಪತ್ರ
2 ) ಆಧಾರ್ ಕಾರ್ಡ್
3 ) PAN Card
4 ) Caste Certificate , ಅನ್ವಯಿಸಿದ್ದಾರೆ .
5 ) ನಿವಾಸ / ಸಂಬಂಧಿತ ಪ್ರಮಾಣಪತ್ರಗಳು
6 ) ಬ್ಯಾಂಕ್ ಪಾಸ್ ಬುಕ್
7 ) ಇತ್ತೀಚಿನ ಪಾಸ್ ಫೋಟೋ ಸೈಜ್ ಫೋಟೋ
8 ) ಸಹಿ
9 ) ಇತರ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ಮುನ್ನ ಗಮನಿಸಬೇಕಾದದ್ದು
ಸರ್ಕಾರಿ ಉದ್ಯೋಗದ ಅರ್ಜಿ ಸಲ್ಲಿಸುವಾಗ ಹೆಸರು , ಜನ್ಮ ದಿನಾಂಕ , ವಿದ್ಯಾರ್ಹತೆ , ವರ್ಗ ಹಾಗೂ ಇತರ ವಿವರಗಳನ್ನು ದಾಖಲೆಗಳಲ್ಲಿರುವಂತೆ ಸರಿಯಾಗಿ ನಮೂದಿಸಬೇಕು . ಅರ್ಜಿ ಸಲ್ಲಿಸಿದ ನಂತರ ತಪ್ಪು ಮಾಹಿತಿ ಕಂಡುಬಂದರೆ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ Submit ಮಾಡುವ ಮೊದಲು ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ .
ಅದೇ ರೀತಿ , ಅಭ್ಯರ್ಥಿಗಳು * ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ * , ತಮ್ಮ ವಿದ್ಯಾರ್ಹತೆ ಮತ್ತು ದೈಹಿಕ ಅರ್ಹತೆ ಈ ನೇಮಕಾತಿಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಅರ್ಜಿ ಸಲ್ಲಿಸಬೇಕು .
ಕರ್ನಾಟಕ-ಕಾರಾಗೃಹ-ಇಲಾಖೆಯ-ನೇಮಕಾತಿ-2026 ಅಧಿಕೃತ ವೆಬ್ಸೈಟ್ click here
ಪ್ರಮುಖ ದಿನಾಂಕಗಳು
- ಅಧಿಸೂಚನೆ ಪ್ರಕಟಣೆ * 18 – 09 – 2026*
ಆನ್ ಲೈನ್ ಅರ್ಜಿ ಆರಂಭ * 19 – 09 – 2026* - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ * 15 – 10 – 2026*
- ಶುಲ್ಕ ಪಾವತಿಗೆ ಕೊನೆಯ ದಿನಾಂಕ * 16- 10- 2026 *
- ಲಿಖಿತ ಪರೀಕ್ಷೆ * 21 – 11 – 2026 *
- ಪರೀಕ್ಷೆಯ ಸಮಯ : ಮಧ್ಯಾಹ್ನ 3:00 ರಿಂದ 4:00 ರವರೆಗೆ
ಕೊನೆಯ ಮಾತು
ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಈ ನೇಮಕಾತಿಯಲ್ಲಿ ಒಟ್ಟು*576 ಹುದ್ದೆಗಳು* ಇರುವುದರಿಂದ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದು ಗಮನಿಸಬೇಕಾದ ಅಧಿಸೂಚನೆಯಾಗಿದೆ . ವಿಶೇಷವಾಗಿ ವಾರ್ಡರ್ ಹುದ್ದೆಗೆ SSLC ವಿದ್ಯಾರ್ಹತೆ ನಿಗದಿಪಡಿಸಿರುವುದರಿಂದ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಎಲ್ಲಾ ಷರತ್ತುಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು .
ಮುಖ್ಯವಾಗಿ , ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ವಿಧ್ಯರ್ಹತೆ , ದೈಹಿಕ ಮಾನದಂಡ , ಪರೀಕ್ಷಾ ವಿಧಾನ , ಶುಲ್ಕ ಮತ್ತು ಇತರ ನಿಯಮಗಳನ್ನು ಸಂಪೂರ್ಣವಾಗಿ ಓದಿ ಖಚಿತಪಡಿಸಿಕೊಳ್ಳಿ .*
