ದಸರಾ ಹಬ್ಬದ ಮೂಲ ಉದ್ದೇಶ ”ಅಧರ್ಮದ ಮೇಲೆ ಧರ್ಮದ ಜಯ ” ಜಗತಿಗೆ ಹೇಳುವ ಹಬ್ಬ ಈ ಹಬ್ಬವನ್ನು ಆಚರಿಸುವ ಹಿಂದೆ ಪ್ರಮುಖ ಪಾರಾಣಿಕ ಕಥೆಗಳು ಹಾಗೂ ಮಹಾಭಾರತದ ಒಂದು ಸನ್ನಿವೇಶ ಇದೆ.ಮೈಸೂರು ದಸರಾ 2026
ರಾಕ್ಷಸ ಮಹಿಷಾಸುರನು ಬ್ರಹ್ಮನನ್ನಿಂದ ವರ ಪಡೆದು. ದೇವತಾಗಳಿಗೆ ಋಷಿ ಮುನಿಗಳಿಗೆ ಮತ್ತು ಜನಗಳಿಗೆ ತುಂಬಾ ಹಿಂಸೆ ಕೊಡುತಿರುತ್ತಾನೆ. ಅವನನ್ನು ಸಂಹಾರಿಸಲು ಯಾವ ಪುರುಷನಿಂದಲೂ ಸಾಧ್ಯವಿರಲಿಲ್ಲ. ಆಗ ತ್ರಿಮೂರ್ತಿಗಳು ಮತ್ತು ಸಕಲ ದೇವತೆಗಳ ಶಕ್ತಿಯಿಂದ ಆದಿಶಕ್ತಿ ಜಗನ್ಮಾತೆ ಚಾಮುಂಡೇಶ್ವರಿ (ದುರ್ಗಿ ) ಯಾಗಿ ಅವತಾರಿಸಿದಳು. ಹಾಗ ದೇವಿ ಮತ್ತು ಮಹಿಷಾಸುರನ ನಡುವೆ ಒಂಬತ್ತು ದಿನಗಳ ಕಾಲ ಭೀಕರ ಯುಧ ನೆಡೆಯಿತು. ಕೊನೆಗೆ ಹತ್ತನೇಯ ದಿನ ದೇವಿ ಮಹಿಷಾಸುರನ್ನು ಸಂಹಾರಿಸಿ ಇಡೀ ಲೋಕಕ್ಕೆ ಶಾಂತಿ ತಂದಳು. ಮಹಿಷಾಸುರನನ್ನು ಸಂಹಾರಿಸಿದ ದಿನವೇ ವಿಜಯದಶಮಿ ಇದರ ಸಂಕೇತವಾಗಿ ಪ್ರತಿವರ್ಷ ದಸರಾ ಆಚರಿಸಲಾಗುತಿದೆ.

ಪ್ರತಿ ವರ್ಷ ಮೈಸೂರ್ ದಸರಾ ಬಂತೆಂದರೆ ಸಾಂಸ್ಕೃತಿಕ ನಗರಿ ಹೊಸ ಕಲೆ ಪಡೆಯುತದೆ. ಆದರೆ 2026ರ ನಾಡಹಬ್ಬ ದಸರಾ ಹಿಂದಿನ ವರ್ಷಗಳಿಗಿಂತ ಸ್ವಲ್ಪ ಭಿನ್ನ ಮತ್ತು ವಿಶೇಷ. ದಸರಾ ಕಣ್ಣುತುಂಬಿಕೊಳಲು ನೀವು ಪ್ಲಾನ್ ಮಾಡುತಿದ್ದರೆ ಆಡಳಿತ ಮಂಡಳಿಯ ಹೊಸ ನಿಯಮಗಳು ಬದಲಾವಣೆಗಳು ಮತ್ತು ಹೊಸ ಆಕರ್ಷಣೆಗಳ ಬಗ್ಗೆ ತಿಳಿದು ಕೊಳ್ಳಿ.
ಬನ್ನಿ ಮೈಸೂರು ದಸರಾ 2026ದಲ್ಲಿ ಏನಲ್ಲ ಬದಲಾವಣೆ ಆಗಿವೆ ಅನ್ನೋದನ್ನ ಸಂಷಿಕ್ತವಾಗಿ ತಿಳಿದುಕೊಳ್ಳನ
ಮೈಸೂರು ದಸರಾ 2026: 11 ದಿನಗಳ ಸಂಭ್ರಮ
ಸಾಮಾನ್ಯವಾಗಿ ನವರಾತ್ರಿ 9 ಅಥವಾ 10 ದಿನಗಳ ಕಾಲ ಆಚರಿಸಲಾಗುತ್ತದೆ. ಆದರೆ ಈ ಬಾರಿ ಪಂಚಾಗಾದ ತಿಥಿ ಹಾಗೂ ದಿನಗಳ ಪ್ರಕಾರ ಈ ಬಾರಿಯೂ ಮೈಸೂರ್ ದಸರಾ ಮಹೋತ್ಸವು ಒಟ್ಟು 11 ದಿನಗಳ ಕಾಲ ಅದ್ದೂರಿಯಾಗಿ ನೆಡೆಯಲಿದೆ.
1. ಉತ್ಸವದ ಆರಂಭ
ಅಕ್ಟೋಬರ್ 11.2026 ರಂದು ಚಾಮುಂದಿಬೆಟ್ಟದಲಿ. ದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ

2.ವಿಜಯದಶಮಿ ಹಾಗೂ ಜಂಬುಸವಾರಿ.
ಅಕ್ಟೋಬರ್ 21,2026 ರಂದು ನಮ್ಮ ನಾಡಿನ ವಿಜೃಂಭಣೆ ಯನ್ನು ತೋರಿಸುವ ಮೈಸೂರಿನಲ್ಲಿ ಮಾತು ನಾಡಿನ ಆಕರ್ಷಣೆಯಾದ ವಿಶ್ವವಿಖ್ಯಾತ ಚಿನ್ನದ ಅಂಬಾರಿ ಹೋತ್ತ ಆನೆಗಳ ಜಂಬುಸವಾರಿ ಜರಗಲಿದೆ..
ರಾಜ ಪ್ರಭುತ್ವ ಇದ್ದ ಕಾಲದಲ್ಲಿ ಮಹಾರಾಜರೇ ಸ್ವಥಾ ಚಿನ್ನದ ಅಂಬಾರಿಯಲ್ಲಿ ಕುಳಿತು ರಾಜಬಿದಿಯಲ್ಲಿ ಸವಾರಿ ಮಾಡುತಾ ಇದ್ದರು. ರಾಜ ಪ್ರಭುತ್ವ ಅಂತ್ಯಗೊಂಡನಂತರ. ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಪರತೀಷ್ಟಪನೆ ಮಾಡಿ ಜಂಬುಸವಾರಿ ಮಾಡುತಾರೆ
ಈ ಚಿನ್ನದ ಅಂಬಾರಿ ಒಟ್ಟು 750 ಕೆಜಿ ತುಕಾವಿದೆ. ಇದು ಶುದ್ಧ ಚಿನ್ನದಿಂದ ತಯಾರಿಸಲಾಗಿದೆ. ಈ ಅಂಬಾರಿ ವರ್ಷಪೂರ್ತಿ ಮೈಸೂರ್ ಅರಮನೆಯಲ್ಲಿ ಭದ್ರತೆಜೊತೆಗೆ ಇಡಲಾಗುತದೆ. ಮತ್ತು ಕೇವಲ ದಸರಾ ಜಂಬುಸವಾರಿಯ ದಿನ ಮಾತ್ರ ಹೊರಬರುತ್ತದೆ.
ಮೆರವಣಿಗೆಯು ಮೈಸೂರು ಅರಮನೆಯಿಂದ ಶುರುವಾಗುತದೆ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಮೈಸೂರ್ ರಾಜ್ಯವಂಶಸ್ಥರು ತಾಯಿ ಚಾಮುಂಡೇಶ್ವರಿಗೆ ಪುಷ್ಪರ್ಚನೆ ಮಾಡಿದ ನಂತರ 21. ಕುಶಾಲತೋಪುಗಳ ಗೌರವ ವಂದನೆಗಳೊಂದಿಗೆ ಜಂಬುಸವಾರಿ ಆರಂಭವಾಗುತ್ತದೆ. ಅರಮನೆಯಿಂದ ಹೊರಟು ಕೆ.ರ್ ಸರ್ಕಲ್ ಸಾಯಜಿರಾವ್ ರಸ್ತೆ ಮೂಲಕ ಸಾಗಿ ಸುಮಾರು 5 klm ಕ್ರಾಮಿಸಿ ಬನ್ನಿಮಂಟಪ ತಲುಪುತ್ತದೆ. ಮೆರವಣಿಗೆಯಲ್ಲಿ ಕರ್ನಾಟಕದ 31 ಜಿಲ್ಲೆಗಳ ಸಂಕೃತಿ ಇತಿಯಾಸ. ಮತ್ತು ಪ್ರವಾಸಿತಾಣಗಳ ಸ್ತಬ್ದಚಿತ್ರಗಳ ಮೆರವಣಿಗೆಯಲ್ಲಿ ಸಾಗುತ್ತವೆ.
3.ಪಂಜಿನ ಕವಯತು
ಅಕ್ಟೋಬರ್ 21ರ ರಾತ್ರಿ ಬನ್ನಿಮಂಟಪ ಮೈದಾನದಲ್ಲಿ ರೋಮಚನ ಪಂಜಿನ ಕವಯತು ನೆಡೆಯಲಿದೆ. ಇದರ ಇತಿಯಾಸ ಏನ್ ಅಂದರೆ. ರಾಜರ ಕಾಲದಲ್ಲಿ ವಿಜ್ಯೋತ್ಸವ ನಂತರ ರಾಜರು ತಮ್ಮ ಸೈನ್ಯದ ಸನ್ನಾದತ್ತೆ. ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಲು ಬೆಂಕಿಯ ಪಂಜುಗಳನ್ನು ಹಿಡಿದು ಕವಯತು ನೆಡುಸುತ್ತ ಇದ್ದರು ಮತ್ತು
ಯುದ್ಧ ಸನ್ನದ್ಧತೆ. ಕತ್ತಲಲ್ಲೂ ಸೈನಿಕರು ಹೇಗೆ ಶತ್ರುಗಳನ್ನು ಹೆದ್ರಿಸಬಲ್ಲರು ಎಂದು ಸಂಕೇತಿಕವಾಗಿ ತೋರಿಸುವ ಕಾಸರತ್ತು. ಆದರೆ ಕಾಲಕ್ರಮೇಣ ಇದು ಆದುನಿಕ ಮಿಲಿಟರಿ ಮತ್ತು ಪೊಲೀಸ್ ಇಲಾಖೆಯ ಪ್ರದರ್ಶನವಾಗಿ ಮಾರ್ಪಟಿದೆ.
ಪ್ರಮುಖಪ್ರದರ್ಶನಗಳು
- ರಾಜ್ಯಪಾಲರ ಗೌರವ ವಂದನೆ.
- ಪಂಜುಗಳ ಕಸರತ್ತು
- ಮೋಟಾರ್ ಸೈಕಲ್ ಡೇರಡೆವಿಲ್ ಸಾಹಸ
- ಅಶ್ವರೋಹಿ ಪಡೆಯ ಕಾಸರತ್ತು.
- ಲಿಸರ್ ಶೋ

4.ಆನ್ಲೈನ್ ಟಿಕೆಟ್ ವ್ಯವಸ್ಥೆ.
ಹಿಂದೆಲ್ಲ ದಸರಾ ಜಂಬುಸವಾರಿ ವೀಕ್ಷಣೆಯ ಪಾಸ್ ಗಳನ್ನು ಪಾದಯಾ
ಪಡೆಯಲು ಸಾರಥಿ ಸಾಲಿನಲ್ಲಿ ನಿಲ್ಲಬೇಕಾಗಿತು ಮತ್ತು ಮಾರುಕಟ್ಟೆಯಲ್ಲಿ ಬ್ಲಾಕ್ ಟಿಕೆಟ್ ಹಾವಳಿ ಹೆಚ್ಚಾದ ಕಾರಣ ಇಂತಹ ಸಮಸ್ಯೆನ್ನು ಸರಿಪಡಿಸಲು ಈ ಬಾರಿ ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಂಡಿದೆ. ಗೋಲ್ಡ್ ಕಾರ್ಡ್ ಮತ್ತು ಪಾಸ್ ಗಳನ್ನು ಅಧಿಕೃತ ಆನ್ಲೈನ್ ಪೋರ್ಟಲ್ ಮೂಲಕವೇ ನೇರವಾಗಿ ಸಾರ್ವಜನಿಕರಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.
ಕ್ಯೂಆರ್ ಕೋಡ್ ಮತ್ತು ಬೈಮೆಟ್ರಿಕ್ ಪರಿಶೀಲನೆ. ಏಕೆಂದರೆ ನಕಲಿ ಪಾಸ್ ಗಳನ್ನು ತಡೆಯಲು ಪ್ರವೇಶ ದ್ವಾರಗಳಲ್ಲಿ ಡಿಜಿಟಲ್ ಕ್ಯೂರ್ ಕೋಡ್ ಸ್ಕ್ಯಾನಿಂಗ್ ಕಡ್ಡಾಯಗೊಳಿಸಲಾಗಿದೆ. ಮತ್ತು ಗೋಲ್ಡ್ ಕಾರ್ಡ್ ಹೊಂದಿದವರಿಗೆ ಅರಮನೆ ಆವರಣದಲ್ಲಿ ಆಸನ. ಶ್ರೀ ತಾಯಿ ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ದರ್ಶನ. ಮೈಸೂರ್ ಮೃಗಲಯದ ಮತ್ತು ಕಾರಂಜಿ ಪ್ರೆವಶಕ್ಕೆ ವಿಶೇಷ ಸೇಪ್ರತೆ ಕ್ಯೂ ಕಲ್ಪಿಸಲಾಗಿದೆ
ರೈತ ದಸರಾ. ಮಹಿಳಾ ದಸರಾ ಮತ್ತು ಆಹಾರ ಮೇಳ.
ಕೇವಲ ಮನೆರಂಜನೆ ಮಾತ್ರವಲ್ಲ. ಸಮಾಜಿಕವಾಗಿ ಎಲ್ಲಾ ಸೀರೆಸುವಂತೆ ಮತ್ತು ಎಲ್ಲಾ ವರ್ಗಗಳ ಮಹತ್ವನ್ನು ತೋರಿಸಲು ಈ ಬಾರಿ ಕಾರ್ಯಕ್ರಮಗಳನ್ನು ತುಂಬಾ ಬದಲಾವಣೆ ಮಾಡಿದೆ
1.ಆಹಾರ ಮೇಳ.
ಆಹಾರ ಮೆಳ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಲಲಿತಾ ಮಹಲ್ ಪ್ಯಾಲೇಸ್ ಆವರಣದಲ್ಲಿ ನೆಡಿಯುವ ಆವರಣದಲ್ಲಿ ಮೈಸೂರ್ ಪಾಕ್. ಮೈಸೂರ್ ಮಸಾಲಾದೋಸೆ ಹಾಗೂ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಎಣ್ಣೆ ಗಾಯಿ, ಕರಾವಳಿಯ ನೀರ್ ದೋಸೆ, ಹಾಗೂ ಮಲೆನಾಡಿನ ವಿಧ ವಿಧವಾದ ಸಿರಿಧಾನ್ಯಗಳ ಮೇಲೆ ನನೆಡುಯುತಿದೆ.

2.ರೈತ ಮತ್ತು ಮಹಿಳಾ ದಸರಾ.
ಗ್ರಾಮೀನಾ ಭಾಗದ ಕರಕುಶಲ ವಸ್ತುಗಳು. ಕೃಷಿ ಉತ್ಪನ್ನಗಳು ಮಾತು ಮಹಿಳಾ ಸ್ವಸಹಾಯ ಸಂಘದಿನದ ತಯಾರಿಸಿದ ವಸ್ತುಗಳ ಪ್ರದರ್ಶನ. ಮತ್ತು ಮಾರಾಟ ಹಾಗೂ ಮಾರಾಟಕ್ಕೆ ಡಿಜಿಟಕ್ ಪೆಮೆಂಟ್ ಸೇವೆಯನ್ನು ಕಲ್ಪಿಸಲಾಗಿದೆ.
ಹಾಗೂ ದೇವರಾಜ್ ಅರಸ್ ಕುಸ್ತಿ ಅಕಾಡದಲ್ಲಿ ನೆಡೆಯುವ ನಡಕುಸ್ತಿಗೆ ಮೊದಲನೇ ಬಾರಿ ಮಹಿಳಾ ಪೈಲ್ವಾನರಿಗೆ ಅವಕಾಶ ಕೊಟ್ಟಿದಾರೆ ಮತ್ತಷ್ಟು ರೋಮಾಂಚನಕಾರಿಯಾಗಿರಲಿದೆ
ಟ್ರಾವೆಲ್ ಟಿಪ್ಸ್ Travel Tips
ದಸರಾ ದಿನಗಲ್ಲಿ
ದಾಸರ ದಿನಗಲ್ಲಿ ಲಕ್ಷಾಂತರ ಜನ ಮೈಸೂರಿಗೆ ಬರುವುದರಿಂದ ಹೋಟೆಲ್ ರೂಮಗಳು ಬೇಗನೆ ಭರ್ತಿಯಾಗಿರುತ್ತದೆ ನೀವು ಕೊನೆ ಕ್ಷಣದಲ್ಲಿ ತೊಂದರೆಯಾಗಬಾರದು ಅಂದರೆ ಇಗಲೇ ಹೋಟೆಲ್ ರೂಮ್ಅನ್ನು ಅಡ್ವಾನ್ಸ್ ಆಗಿ ಬುಕಿಂಗ್ ಮಾಡಿಕೊಳ್ಳಿ.
ಜಂಬುಸವಾರಿದಿನ ಮೈಸೂರ್ ನಗರದ ಮದ್ಯಾಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧವೀರುತ್ತದೆ ಮೆರವಣಿಗೆ ಆರಂಭವಾಗುವ ಕಾನಿಷ್ಠ 3 ಗಂಟೆ ಮುಂಚಿತವಾಗಿ ನಿಮ್ಮ ಆಸನದ ಸ್ಥಳಕ್ಕೆ ತಲುಪಿ. ಮತ್ತು ಬೆಂಗಳೂರಇಂದ ಬರುವವರು ಬೇಗನೆ ಬರುವುದು ಸೂಕ್ತ.
ನಾಡಿನ ಗತಾವೈಭವ ಸಂಸ್ಕೃತಿ ಮತ್ತು ಆದುನಿಕ ತಂತ್ರಜ್ಞಾನ ಅಪೂರ್ವ ಸಂಗಮ್ಮ. ಈ ಹಬ್ಬದ ಸೊಬಗ್ಗನ್ನು ಕಣ್ತುಂಬಿಕೊಳ್ಳಲು ತಪ್ಪದೆ ನಾಡಿನ ಪರಂಪರೆಯಾದ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿ
ಮೈಸೂರ್ ದಸರದಲ್ಲಿ ನಿಮಗೆ ಏನು ಇಷ್ಟ ಎಂದು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ..
Meesho Recruitment 2026 : Fresher ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ click here
